ಬಾಲಿವುಡ್ ನಲ್ಲಿ ಇಷ್ಟು ದಿನಗಳ ಕಾಲ ದೊಡ್ಡ ಸುದ್ದಿ ಮಾಡಿದ್ದ 'ಪದ್ಮಾವತ್' ಸಿನಿಮಾಗೆ ಅಂತು ಬಿಡುಗಡೆಯ ಭಾಗ್ಯ ಸಿಕ್ಕಿದೆ. 'ಪದ್ಮಾವತ್' ಸಿನಿಮಾ ಇದೇ ಗುರುವಾರ ರಿಲೀಸ್ ಆಗುವುದಕ್ಕೆ ಸಜ್ಜಾಗಿದೆ. ಆದರೆ ಇದೀಗ 'ಪದ್ಮಾವತ್'ಗೆ ಸೌತ್ ಕ್ವೀನ್ ಅನುಷ್ಕಾ ಸವಾಲು ಹಾಕಿದ್ದಾರೆ. <br /> <br />ಅನುಷ್ಕಾ ಶೆಟ್ಟಿ ನಟನೆಯ 'ಭಾಗಮತಿ' ಸಿನಿಮಾ ಕೂಡ ಚಿತ್ರಮಂದಿರಕ್ಕೆ ಬರಲು ರೆಡಿಯಾಗಿದೆ. ಈ ಸಿನಿಮಾ ಇದೇ ತಿಂಗಳ 26ಕ್ಕೆ ಅಂದರೆ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಎರಡು ಸಿನಿಮಾಗಳಿಗೂ ಒಂದೇ ಒಂದು ದಿನ ಗ್ಯಾಪ್ ಇದ್ದು, ಎರಡು ಚಿತ್ರಗಳ ನಡುವೆ ನೇರ ಪೈಪೋಟಿ ಶುರುವಾಗಿದೆ. ಸ್ಟಾರ್ ನಟರ ಸಿನಿಮಾಗಳ ನಡುವೆ ನಡೆಯುತ್ತಿದ್ದ ಈ ಫೈಟ್ ಈಗ ನಟಿಯರ ಚಿತ್ರಕ್ಕೂ ನಡೆಯುತ್ತಿದೆ. 'ಭಾಗಮತಿ' ಮತ್ತು 'ಪದ್ಮಾವತ್' ನಡುವಿನ ಹೋರಾಟದಲ್ಲಿ ಗೆಲುವು ಯಾರಿಗೆ ಎನ್ನುವುದು ದೊಡ್ಡ ಕುತೂಹಲ ಮೂಡಿಸಿದೆ. <br /> <br /> Actress Anushka Shetty 'Bhaagamathie' movie box office clash with Deepika Padukone 'Padmavat' movie. 'Padmavat' will be releasing on January 25 and 'Bhaagamathie' will be releasing on January 26.